ಪ್ರೊ. ಆನಂದ ಶರದ ದೇಶಪಾಂಡೆ,

B.E.(Mech.);M.Tech.;Ph.D.

ಕುಲಪತಿಗಳು,

ಬಾಗಲಕೋಟ ವಿಶ್ವವಿದ್ಯಾಲಯ,

(ಕರ್ನಾಟಕದ ಸರ್ಕಾರದ ರಾಜ್ಯ ಸಾರ್ವಜನಿಕ ವಿಶ್ವವಿದ್ಯಾಲಯ)

ಜಮಖಂಡಿ-587301, ಕರ್ನಾಟಕ, ಭಾರತ

+91 9449065500

vc@bgku.ac.in

asdeshpandex@gmail.com

ಪ್ರೊ. ಆನಂದ ಶರದ ದೇಶಪಾಂಡೆ, ಮೆಕ್ಯಾನಿಕಲ್ ಇಂಜಿನಿಯರಿAಗ್‌ನಲ್ಲಿ ಪದವಿಯನ್ನು ಕರ್ನಾಟಕ ವಿಶ್ವವಿದ್ಯಾಲಯದ ಹುಬ್ಬಳ್ಳಿಯ ಬಿವಿಬಿಸಿಇಟಿ ಯಲ್ಲಿ ಮುಗಿಸಿ, ಎಂ.ಟೆಕ್. ಅನ್ನು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಕಾನ್ಪುರದಲ್ಲಿ ಮತ್ತು ನಂತರ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಸುರತ್ಕಲ್ (ಮಂಗಳೂರು ವಿಶ್ವವಿದ್ಯಾನಿಲಯ) ದಲ್ಲಿ ಡಾಕ್ಟರೇಟ್ ಪದವಿಯನ್ನು ಮೆಕ್ಯಾನಿಕಲ್ ಎಂಜಿನಿಯರಿAಗ್ ಕ್ಷೇತ್ರದ CDA/CAM  ವಿಷಯದಲ್ಲಿ ಪಡೆದರು. ಅವರು ಒಟ್ಟು 38 ವರ್ಷಗಳ ಸುದೀರ್ಘವಾದ ಶೈಕ್ಷಣಿಕ ಮತ್ತು ಉದ್ಯಮ ಕ್ಷೇತ್ರದಲ್ಲಿ ಅನುಭವನ್ನು ಹೊಂದಿದ್ದಾರೆ.

ಪ್ರಸ್ತುತ ಅವರು ಕರ್ನಾಟಕ ರಾಜ್ಯ ಸಾರ್ವಜನಿಕ ವಿಶ್ವವಿದ್ಯಾಲಯವಾದ ಬಾಗಲಕೋಟ ವಿಶ್ವವಿದ್ಯಾಲಯದ ಕುಲಪತಿಗಳಾಗಿ, ಉತ್ತರ ಕರ್ನಾಟಕದ ಗ್ರಾಮೀಣ ಜಿಲ್ಲೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ ಮತ್ತು ಗುಣಮಟ್ಟದ ಶಿಕ್ಷಣವನ್ನು ನಿಜವಾಗಿಯೂ ಅಗತ್ಯವಿರುವ ಮತ್ತು ಅರ್ಹ ವಿದ್ಯಾರ್ಥಿಗಳ ಅಭಿವೃದ್ಧಿಗೆ ಉತ್ಸಾಹದಿಂದ ಪ್ರಯತ್ನಿಸುತ್ತಿದ್ದಾರೆ.

ಈ ಮೊದಲು, ಅವರು 03 ವರ್ಷ 03 ತಿಂಗಳ ಅಧಿಕಾರಾವಧಿಯನ್ನು ಕರ್ನಾಟಕ ರಾಜ್ಯ ಸಾರ್ವಜನಿಕ ವಿಶ್ವವಿದ್ಯಾನಿಲಯವಾದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ಬೆಳಗಾವಿಯಲ್ಲಿ ಮಾನ್ಯ ಕುಲಸಚಿವರಾಗಿ(ಆಡಳಿತ) ಸೇವೆಯನ್ನು ಪೂರ್ಣಗೊಳಿಸಿದ್ದಾರೆ. ವಿಟಿಯು ಇಡೀ ಕರ್ನಾಟಕ ರಾಜ್ಯದ ಅಧಿಕಾರ ವ್ಯಾಪ್ತಿಯನ್ನು ಹೊಂದಿದ್ದು 3,50,000 ವಿದ್ಯಾರ್ಥಿಗಳು ಮತ್ತು 208 ಸಂಯೋಜಿತ ಸಂಸ್ಥೆಗಳನ್ನು ಹೊಂದಿದೆ.   ಎನ್‌ಐಆರ್‌ಎಫ್ 2022 ರ ಪ್ರಕಾರ ವಿಟಿಯು ವಿಶ್ವವಿದ್ಯಾಲಯಗಳಲ್ಲಿ ಟಾಪ್ 100 ಮತ್ತು ಎಂಜಿನಿಯರಿAಗ್ ವಿಭಾಗದಲ್ಲಿ 49 ನೇ ಸ್ಥಾನವನ್ನು ಪಡೆದಿದ್ದು, ಇವರ ಅಧಿಕಾರಾವಧಿಯಲ್ಲಿ. ಪ್ರೊ. ಆನಂದ ಶರದ ದೇಶಪಾಂಡೆ ಯವರು ರಾಷ್ಟ್ರೀಯ ಶಿಕ್ಷಣ ನೀತಿ 2020 ರ ಅನುಷ್ಠಾನದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಈ ಹಿಂದೆ ಅವರು ಡಿಸೆಂಬರ್ 2009 ರಿಂದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಅಡಿಯಲ್ಲಿ ಸ್ವಾಯತ್ತ ಸಂಸ್ಥೆಯಾದ ಬೆಳಗಾವಿಯ ಕೆಎಲ್‌ಎಸ್ ಗೊಗ್ಟೆ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಪ್ರಾಂಶುಪಾಲರಾಗಿ ಕೆಲಸ ಮಾಡಿದ್ದಾರೆ. ಅವರು 1988 ರಿಂದ ಈ ಸಂಸ್ಥೆಯೊAದಿಗೆ ಸಂಬAಧ ಹೊಂದಿದ್ದು, ಮೆಕ್ಯಾನಿಕಲ್ ಇಂಜಿನಿಯರಿAಗ್ ವಿಭಾಗದ ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರಾಗಿ ವಿವಿಧ ಶೈಕ್ಷಣಿಕ ಹುದ್ದೆಗಳಲ್ಲಿ ಕೆಲಸ ಮಾಡಿದ್ದರೆ. ಆರಂಭಿಕ ದಿನಗಳಲ್ಲಿ, ಅವರು ಕೆಲವು ಪ್ರಮುಖ ಉದ್ಯಮಗಳಾದ ಕಿರ್ಲೋಸ್ಕರ್ ಬ್ರದರ್ಸ್ ಲಿಮಿಟೆಡ್, ಕಿರ್ಲೋಸ್ಕರವಾಡಿ ಮತ್ತು ಬೆಸ್ಟ್ & ಕ್ರೋಂಪ್ಟನ್ ಜೊತೆ ಕೆಲಸ ಮಾಡಿದರು ಮತ್ತು ಮೂರು ವರ್ಷಕ್ಕಿಂತ ಅಧಿಕ ಕಾಲ ವಡೋದರಾದಲ್ಲಿದ್ದರು. ಅವರು 2007 ರಿಂದ 2009 ರವರೆಗೆ ಮುಂಬೈನ ಬಾಂದ್ರಾ (W) Fr. C. ರೊಡ್ರಿಗಸ್ ಕಾಲೇಜ್ ಆಫ್ ಇಂಜಿನಿಯರಿAಗ್‌ನಲ್ಲಿ ಪ್ರಾಂಶುಪಾಲರಾಗಿದ್ದರು.

ಅವರು 10 ಪಿಎಚ್‌ಡಿ ಸಂಶೋದನಾರ್ಥಿಗಳಿಗೆ ಮಾರ್ಗದರ್ಶನ ಮಾಡಿದ್ದಾರೆ ಮತ್ತು 74 ಸಂಶೋಧನಾ ಲೇಖನಗಳನ್ನು ನಿಯತಕಾಲಿಕೆಗಳಲ್ಲಿ ಮತ್ತು ಸಮ್ಮೇಳನಗಳಲ್ಲಿ ಪ್ರಕಟಿಸಿದ್ದಾರೆ, ಅದರಲ್ಲಿ 40 ಕ್ಕಿಂತ ಹೆಚ್ಚಿನವು Scopus, WOS, ಮತ್ತು SCI ಗಳಲ್ಲಿವೆ. ಅವರು ಅಮೇರಿಕನ್ ಸೊಸೈಟಿ ಆಫ್ ಮೆಕ್ಯಾನಿಕಲ್ ಇಂಜಿನಿಯರ್ಸ್, ಇನ್ಸ್ಟಿಟ್ಯೂಷನ್ ಆಫ್ ಇಂಜಿನಿಯರ್ಸ್ (ಭಾರತ) ನಂತಹ ಕೆಲವು ವೃತ್ತಿಪರ ಸಂಸ್ಥೆಗಳ ಸದಸ್ಯರಾಗಿದ್ದಾರೆ. ಅಲ್ಲದೆ ರೋಟರಿ 3170 ಜಿಲ್ಲೆಯ ಇ-ಕ್ಲಬ್‌ನ ಮಾಜಿ ಅಧ್ಯಕ್ಷರು ಮತ್ತು ಚಾರ್ಟರ್ ಸದಸ್ಯರಾಗಿದ್ದರು. ವಿವಿಧ ಶೈಕ್ಷಣಿಕ ಕಾರ್ಯಯೋಜನೆಗಳ ಮೇಲೆ ಅಮೇರಿಕಾ, ಜಪಾನ್, ಚೀನಾ, ಸಿಂಗಾಪುರ್ ಮತ್ತು ನೆದರ್ಲ್ಯಾಂಡ್ಸ್ ದೇಶಗಳಿಗೆ ಭೇಟಿ ನೀಡಿದ್ದಾರೆ. ಅವರು ವೃತ್ತಿಜೀವನದಲ್ಲಿ ಸಂಶೋಧನೆ, ಆಡಳಿತ ಮತ್ತು ಬೋಧನೆಯನ್ನು ಉತ್ತಮವಾಗಿ ನಿರ್ವಹಿಸಬಲ್ಲವರಾಗಿದ್ದಾರೆ.