ಆತ್ಮೀಯ ವಿದ್ಯಾರ್ಥಿಗಳೇ, ಅಧ್ಯಾಪಕರೇ, ಸಿಬ್ಬಂದಿಗಳೇ ಮತ್ತು ಸಂದರ್ಶಕರೇ,
ನಮ್ಮ ವಿಶ್ವವಿದ್ಯಾಲಯದ ಜಾಲತಾಣಕ್ಕೆ ನಿಮ್ಮನ್ನು ಸ್ವಾಗತಿಸಲು ನನಗೆ ಸಂತೋಷವಾಗಿದೆ. ಕುಲಪತಿಯಾಗಿ, ಪ್ರಾದೇಶಿಕ ಸ್ಪರ್ಶ ಮತ್ತು ಜಾಗತಿಕ ದೃಷ್ಠಿ ಕೋನದೊಂದಿಗೆ ಶಿಕ್ಷಣ ಮತ್ತು ಸಂಶೋಧನಾ ಅನುಭವವನ್ನು ಒದಗಿಸಲು ಮೀಸಲಾಗಿರುವ ಸಂಸ್ಥೆಯ ಭಾಗವಾಗಿರಲು ನಾನು ಹೆಮ್ಮೆಪಡುತ್ತೇನೆ.
ಇದು ಬಾಗಲಕೋಟ ಜಿಲ್ಲೆಯ ಎಲ್ಲಾ ಸಾಮಾನ್ಯ ಪದವಿ ಮತ್ತು ಶಿಕ್ಷಣ ಮಹಾವಿದ್ಯಾಲಯಗಳ ಅಧಿಕಾರ ವ್ಯಾಪ್ತಿಯನ್ನು ಹೊಂದಿರುವ ವಿಶ್ವವಿದ್ಯಾಲಯವಾಗಿದೆ. ವಿಶ್ವವಿದ್ಯಾಲಯವು ಜಮಖಂಡಿಯಲ್ಲಿ ಪ್ರಧಾನ ಕಚೇರಿಯನ್ನು ಹೊಂದಿದೆ, ಇದು ಐತಿಹಾಸಿಕ ಹಿನ್ನೆಲೆಯನ್ನು ಹೊಂದಿರುವ ಉತ್ತರ ಕರ್ನಾಟಕದ ಪ್ರಮುಖಸ್ಥಳ ವಾಗಿದೆ. ವಿಶ್ವವಿದ್ಯಾಲಯವು ತನ್ನ ಮುಖ್ಯ ಆವರಣದಲ್ಲಿ ವಿವಿಧ ವಿಭಾಗಗಳಲ್ಲಿ ಸ್ನಾತಕೋತ್ತರ ಕಾರ್ಯಕ್ರಮಗಳನ್ನು ನೀಡುತ್ತದೆ
ವಿಶ್ವವಿದ್ಯಾಲಯವು ಶೈಕ್ಷಣಿಕವಾಗಿ ಹಿಂದುಳಿದ ಪ್ರದೇಶದಲ್ಲಿ ಸಂಪೂರ್ಣವಾಗಿ ಡಿಜಿಟಲ ಮತ್ತು ಉದ್ಯಮಶೀಲ (ಕೌಶಲ್ಯಆಧಾರಿತ) ಮಾದರಿ ವಿಶ್ವವಿದ್ಯಾಲಯವಾಗಿ ಸ್ಥಾಪಿಸಲ್ಪಟ್ಟಿದೆ ಮತ್ತು “ದುಡಿಮೆಯೊಂದಿಗೆ ಕಲಿಕೆ ” ಪರಿಕಲ್ಪನೆಗೆ ಒತ್ತು ನೀಡುತ್ತದೆ.
ಬಾಗಲಕೋಟ ವಿಶ್ವವಿದ್ಯಾಲಯವು ಉತ್ತಮ ಶೈಕ್ಷಣಿಕ ವಾತಾವರಣ ದಿಂದ ವಂಚಿತರಾಗಿರುವ ಗ್ರಾಮೀಣ ವಿದ್ಯಾರ್ಥಿಗಳ ಅಗತ್ಯವನ್ನು ಪೂರೈಸುವ ವಿಭಿನ್ನ ದೃಷ್ಟಿಕೋನದೊಂದಿಗೆ ಕರ್ನಾಟಕ ರಾಜ್ಯದ ಒಂದು ಪ್ರಮುಖ ವಿಶ್ವವಿದ್ಯಾಲಯವಾಗಿದೆ.
ನಾವು ಸಾಂಪ್ರದಾಯಿಕ ತರಗತಿಯ ಅನುಭವ ಮತ್ತು ಡಿಜಿಟಲ ಕಲಿಕೆ ಎರಡಕ್ಕೂ ಒತ್ತು ನೀಡುತ್ತೇವೆ. ವಿಶ್ವವಿದ್ಯಾಲಯವು ಅದರ ಮಾರ್ಗಸೂಚಿಗಳನ್ನು ನಿರ್ಮಿಸುವ ಪ್ರಕ್ರಿಯೆಯಲ್ಲಿದೆ, ಇದು ಖಂಡಿತವಾಗಿಯೂ ರಾಷ್ಟ್ರೀಯ ಶಿಕ್ಷಣ ನೀತಿ 2020 ರ ಅಂಶಗಳನ್ನು ಒಳಗೊಂಡಿರುತ್ತದೆ.
ನಮ್ಮ ವಿಶ್ವವಿದ್ಯಾಲಯವು ಬೋಧನೆ, ಸಂಶೋಧನೆಯ ಶ್ರೇಷ್ಠತೆಗೆ ಮತ್ತು ಸಮುದಾಯದ ಒಳಿತಿಗಾಗಿ ಬದ್ಧವಾಗಿದೆ. ನಮ್ಮ ವಿದ್ಯಾರ್ಥಿಗಳು, ಅಧ್ಯಾಪಕರು ಮತ್ತು ಸಿಬ್ಬಂದಿಗಳು ತಮ್ಮ ಸಂಪೂರ್ಣ ಸಾಮರ್ಥ್ಯವನ್ನು ಸಾಧಿಸಲು ಅನುವುಮಾಡಿಕೊಡುವ ಪೂರಕ ವಾತಾವರಣವನ್ನು ಒದಗಿಸಲು ನಾವು ಪ್ರಯತ್ನಿಸುತ್ತೇವೆ.
ನೀವು ನಮ್ಮ ಜಾಲತಾಣದಲ್ಲಿ ನ್ಯಾವಿ ಗೇಟ್ಮಾಡುವಾಗ, ನಮ್ಮ ಕಾರ್ಯಕ್ರಮಗಳು, ಸಂಶೋಧನೆ ಮತ್ತು ಸಮುದಾಯದ ಭಾಗವಹಿಸುವಿಕೆಯ ಹೊಸ ಪ್ರಯತ್ನದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀವು ಕಾಣಬಹುದು. ನೀವು ನಿರೀಕ್ಷಿಸಿದಂತೆ ದೂರದೃಷ್ಠಿವುಳ್ಳ ವಿದ್ಯಾರ್ಥಿಗಳು, ಅಧ್ಯಾಪಕರು, ಸಿಬ್ಬಂದಿಗಳು ಅಥವಾ ಸಮುದಾಯ ಪಾಲುದಾರರಾಗಿದ್ದರೂ, ಈ ಜಾಲತಾಣದಿಂದ ತಿಳಿವಳಿಕೆ ಮತ್ತು ಆಕರ್ಷಕವಾಗಿರುವುದನ್ನು ನೀವು ಕಂಡುಕೊಳ್ಳುತ್ತೀರಿ ಎಂದು ನಾವು ಭಾವಿಸುತ್ತೇವೆ.
ನಮ್ಮ ವಿಶ್ವವಿದ್ಯಾಲಯದ ಬಗ್ಗೆ ನಿಮ್ಮ ಆಸಕ್ತಿಗೆ ಧನ್ಯವಾದಗಳು, ಮತ್ತು ನಿಮ್ಮಿಂದ ಸಲಹೆ ಸೂಚನೆಗಳನ್ನು ಕೇಳಲು ನಾವು ಎದುರುನೋಡುತ್ತೇವೆ.
ಅಂತಿಮವಾಗಿ ನಾವು ಜ್ಞಾನ, ಕೌಶಲ್ಯ ಮತ್ತು ಮಾನವೀಯತೆಯನ್ನು ಉತ್ತೇಜಿಸಲು ಬಯಸುತ್ತೇವೆ.
ತಮ್ಮ ವಿಶ್ವಾಸಿಕ
ಪ್ರೊ. ಆನಂದ ಎಸ್. ದೇಶಪಾಂಡೆ
ಕುಲಪತಿಗಳು.