ಬಾಗಲಕೋಟ ವಿಶ್ವವಿದ್ಯಾಲಯದ ಬಗ್ಗೆ

ಶೈಕ್ಷಣಿಕವಾಗಿ ಹಿಂದುಳಿದ ಪ್ರದೇಶದಲ್ಲಿ ವಿಶ್ವವಿದ್ಯಾಲಯವನ್ನು ಸಂಪೂರ್ಣವಾಗಿ ಡಿಜಿಟಲ್ ಮತ್ತು ಉದ್ಯಮಶೀಲ (ಕೌಶಲ್ಯ ನೆಲೆ) ಮಾದರಿ ವಿಶ್ವವಿದ್ಯಾಲಯವಾಗಿ ಸ್ಥಾಪಿಸಲಾಗಿದೆ, “ನೀವು ಕಲಿಯುವಾಗ ಸಂಪಾದಿಸಿ” ಗೆ ಒತ್ತು ನೀಡಲಾಗಿದೆ.

ಬಾಗಲಕೋಟೆ ವಿಶ್ವವಿದ್ಯಾಲಯ (BGKU) ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ (ತಿದ್ದುಪಡಿ) ಕಾಯ್ದೆ 2022 ರಡಿ (2022 ರ ಅಧಿನಿಯಮ ಸಂಖ್ಯೆ 26, ಇದನ್ನು 10/10/2022 ರಂದು ಅಸಾಧಾರಣ ಗೆಜೆಟ್ ನಲ್ಲಿ  ಪ್ರಕಟಿಸಲಾಗಿದೆ) ಕರ್ನಾಟಕ  ಸರ್ಕಾರವು ಸ್ಥಾಪಿಸಿದ ರಾಜ್ಯ ಸಾರ್ವಜನಿಕ ವಿಶ್ವವಿದ್ಯಾಲಯವಾಗಿದೆ. ಇದು ಬಾಗಲಕೋಟ ಜಿಲ್ಲೆಯ ಎಲ್ಲಾ ಸಾಮಾನ್ಯ ಪದವಿ ಮತ್ತು ಶಿಕ್ಷಣ ಕಾಲೇಜುಗಳ ಅಧಿಕಾರ ವ್ಯಾಪ್ತಿಯನ್ನು ಹೊಂದಿರುವ ವಿಶ್ವವಿದ್ಯಾಲಯವಾಗಿದೆ.

ವಿಶ್ವವಿದ್ಯಾಲಯವು ಜಮಖಂಡಿಯಲ್ಲಿ ಪ್ರಧಾನ ಕಚೇರಿಯನ್ನು ಹೊಂದಿದೆ, ಜಮಖಂಡಿ ಐತಿಹಾಸಿಕ ಹಿನ್ನೆಲೆಯನ್ನು ಹೊಂದಿರುವ ಉತ್ತರ ಕರ್ನಾಟಕದ ಪ್ರಮುಖ ಸ್ಥಳವಾಗಿದೆ. ವಿಶ್ವವಿದ್ಯಾಲಯವು ತನ್ನ ಆವರಣದ  ವಿವಿಧ ವಿಭಾಗಗಳಲ್ಲಿ ಸ್ನಾತಕೋತ್ತರ ತರಗತಿಗಳನ್ನು ನಡೆಸುತ್ತದೆ. ವಿಶ್ವವಿದ್ಯಾಲಯವು ಶೈಕ್ಷಣಿಕವಾಗಿ ಹಿಂದುಳಿದ ಪ್ರದೇಶದಲ್ಲಿ ಸಂರ್ಪೂಣವಾಗಿ ಡಿಜಿಟಲ್ ಮತ್ತು ಉದ್ಯಮಶೀಲ (ಕೌಶಲ್ಯ ಆಧಾರಿತ) ಮಾದರಿ ವಿಶ್ವವಿದ್ಯಾಲಯವಾಗಿ  ಸ್ಥಾಪಿಸಲ್ಪಟ್ಟಿದೆ  ಮತ್ತು “ದುಡಿಮೆದೊಂದಿಗೆ ಕಲಿಕೆ” ಪರಿಕಲ್ಪನೆಗೆ ಒತ್ತು ನೀಡುತ್ತದೆ. 

ವಿಶ್ವವಿದ್ಯಾಲಯವು ಪ್ರಾದೇಶಿಕ ಅಗತ್ಯಗಳನ್ನು ಖಚಿತ  ಪಡಿಸಿಕೊಳ್ಳುತ್ತಿದೆ  ಮತ್ತು ಗ್ರಾಮೀಣ ವಿದ್ಯಾರ್ಥಿಗಳನ್ನು ಉನ್ನತೀಕರಿಸಲು ಮತ್ತು ಬಾಗಲಕೋಟೆ ಜಿಲ್ಲೆ ಮತ್ತು ಹತ್ತಿರದ  ಪ್ರದೇಶಗಳ ವಿದ್ಯಾರ್ಥಿಗಳ ಅಭಿವೃದ್ಧಿಗೆ ಕೊಡುಗೆ ನೀಡಲು ತಾಂತ್ರಿಕ ಕೋರ್ಸುಗಳು, ಕೌಶಲ್ಯ ಆಧಾರಿತ ಕೋರ್ಸುಗಳನ್ನು ಪರಿಚಯಿಸಲು ಯೋಜಿಸುತ್ತಿದೆ.

ಬಾಗಲಕೋಟ ವಿಶ್ವವಿದ್ಯಾಲಯವು ಉತ್ತಮ ಶೈಕ್ಷಣಿಕ ವಾತಾವರಣದಿಂದ ವಂಚಿತರಾಗಿರುವ ಗ್ರಾಮೀಣ ವಿದ್ಯಾರ್ಥಿಗಳ ಅಗತ್ಯವನ್ನು ಪೂರೈಸುವ ವಿಭಿನ್ನ ದೃಷ್ಟಿ ಕೋಣದೊಂದಿಗೆ ಸ್ಥಾಪಿತವಾದ ಕರ್ನಾಟಕ ರಾಜ್ಯದ ಒಂದು ಪ್ರಮುಖ ವಿಶ್ವವಿದ್ಯಾಲಯವಾಗಿದೆ. 2023 ರಲ್ಲಿ ಸ್ಥಾಪಿತವಾದ ವಿಶ್ವವಿದ್ಯಾಲಯವು ವಿದ್ಯಾರ್ಥಿಗಳಿಗೆ ತಮ್ಮ ವೈಯಕ್ತಿಕ ಮತ್ತು ವೃತ್ತಿಪರ ಗುರಿಗಳನ್ನು ತಲುಪಲು ಸಹಾಯ ಮಾಡಲು ಉತ್ತಮ ಗುಣಮಟ್ಟದ ಶಿಕ್ಷಣವನ್ನು ಒದಗಿಸುವ ಗುರಿಯನ್ನು ಹೊಂದಿದೆ.

BGKU ನಲ್ಲಿ, ನಾವು ಸಾಂಪ್ರದಾಯಿಕ ತರಗತಿಯ ಅನುಭವ ಮತ್ತು ಡಿಜಿಟಲ ಕಲಿಕೆ ಎರಡಕ್ಕೂ ಒತ್ತು ನೀಡುತ್ತೇವೆ. ನಮ್ಮ ಅಧ್ಯಾಪಕರು, ತಮ್ಮ ಅಧ್ಯಯನದಲ್ಲಿ ಉತ್ತಮ ಸಾಧನೆಮಾಡಲು ಮತ್ತು ಉದ್ಯಮಿಗಳಾಗಲು ವಿದ್ಯಾರ್ಥಿಗಳನ್ನು ಪ್ರೇರೇಪಿಸಲು ಸಮರ್ಪಿಸಿಕಂಡಿದ್ದಾರೆ. ನಮ್ಮ ನವೀನ ಬೋಧನಾ ತಂತ್ರಗಳು ಮತ್ತು ಸಂಪನ್ಮೂಲಗಳೊಂದಿಗೆ, ನಮ್ಮ ವಿದ್ಯಾರ್ಥಿಗಳು ನಾಳಿನ ನಾಯಕರಾಗಲು ಚೆನ್ನಾಗಿ ಸಿದ್ಧರಾಗುತ್ತಾರೆ. ವಿಶ್ವವಿದ್ಯಾಲಯವು ಅದರ ಮಾರ್ಗಸೂಚಿಗಳನ್ನು ನಿರ್ಮಿಸುವ ಪ್ರಕ್ರಿಯೆಯಲ್ಲಿದೆ, ಇದು ಖಂಡಿತವಾಗಿಯೂ ರಾಷ್ಟ್ರೀಯ ಶಿಕ್ಷಣ ನೀತಿ 2020 ರ ಅಂಶಗಳನ್ನು ಒಳಗೊಂಡಿರುತ್ತದೆ. ಅಂತಿಮವಾಗಿ ಜ್ಞಾನ, ಕೌಶಲ್ಯ ಮತ್ತು ಮಾನವೀಯತೆಯನ್ನು ಉತ್ತೇಜಿಸಲು ನಾವು ಬದ್ಧರಾಗಿದೇವೆ

ನಮ್ಮ ದೃಷ್ಟಿಕೋನ ಮತ್ತು ಧ್ಯೇಯ

ನಮ್ಮ ದೃಷ್ಟಿಕೋನ

  • ಮಾನವೀಯತೆ ಆಧಾರಿತ ಕೌಶಲ್ಯ ಮತ್ತು ಜ್ಞಾನದ ಅಭಿವೃದ್ಧಿಯ ಕೇಂದ್ರವಾಗಿರುವುದು.

  • ವಿದ್ಯಾರ್ಥಿಗಳ ಮನಸ್ಸಿನಲ್ಲಿ ಜ್ಞಾನದ ಮಹತ್ವವನ್ನು ಬೆಳೆಸುವ, ಉತ್ತಮ ಕೌಶಲ್ಯದಿಂದ ಅವರ ಸಾಮರ್ಥ್ಯವನ್ನು ವಿಸ್ತರಿಸಲು ಮತ್ತು ಮಾನವೀಯತೆಯ ಶ್ರೇಷ್ಠ ಮೌಲ್ಯಗಳನ್ನು ಬಿತ್ತುವುದಾಗಿದೆ.

ನಮ್ಮ ಧ್ಯೇಯ

  • ವಿದ್ಯಾರ್ಥಿಗಳಲ್ಲಿ ಜ್ಞಾನ, ಕೌಶಲ್ಯ ಮತ್ತು ಮಾನವೀಯ ಮೌಲ್ಯಗಳನ್ನು ಅಳವಡಿಸುವುದು

  • ಬೇಡಿಕೆಯ ಕೌಶಲ್ಯ ಮತ್ತು ಜ್ಞಾನವನ್ನು ಪಡೆದುಕೊಳ್ಳುವಲ್ಲಿ ಆಜೀವ ಕಲಿಕೆಯ ಪ್ರಚೋದನೆಯನ್ನು ವಿದ್ಯಾರ್ಥಿಗಳಲ್ಲಿ ಮೂಡಿಸುವುದು

  • ಅರ್ಥಪೂರ್ಣ ಮತ್ತು ಸುಸ್ಥಿರ ಸಮಾಜವನ್ನು ಅಭಿವೃದ್ಧಿಪಡಿಸುವಲ್ಲಿ ಅಂತರಶಿಸ್ತೀಯ ಸಂಶೋಧನೆ ಮತ್ತು ಸೃಜನಶೀಲ ಅಧ್ಯಯನದ ಮೂಲಕ ಜ್ಞಾನವನ್ನು ಸೃಷ್ಟಿಸುವುದು

  • ನಾಯಕತ್ವ, ಸಮಸ್ಯೆ ಪರಿಹಾರ, ತಂಡದ ಕೆಲಸ ಕೌಶಲ್ಯ ಮತ್ತು ನೈತಿಕ ನಡವಳಿಕೆಗೆ ಬದ್ಧತೆಯ ಪ್ರಜ್ಞೆಯನ್ನು ವಿದ್ಯಾರ್ಥಿಗಳಿಗೆ ಕಲಿಸುವುದು

  • ಆವಿಷ್ಕಾರ ಮತ್ತು ಸೃಜನಶೀಲತೆ ವೃತ್ತಿಪರ ಬೆಳವಣಿಗೆಯನ್ನು ಉತ್ತೇಜಿಸುವ ಮತ್ತು ಉತ್ತಮ ಪ್ರಪಂಚವನ್ನು ತರುವಂತಹ ವಿಚಾರಗಳ ಮುಕ್ತ ಹರಿವಿಗೆ ವೇದಿಕೆಯನ್ನು ಒದಗಿಸುವುದು

  • ಅವರ ಬೌದ್ಧಿಕ ಪರಿವರ್ತನೆಯ ಪ್ರಯಾಣದಲ್ಲಿ ಹೊಸ ಆಲೋಚನೆಗಳು, ಹೊಸ ತಿಳುವಳಿಕೆಯ ಮಾರ್ಗಗಳು, ತಿಳಿದುಕೊಳ್ಳುವ ಹೊಸ ವಿಧಾನಗಳಿಗೆ ವಿದ್ಯಾರ್ಥಿಗಳನ್ನು ಒಡ್ಡುವ ಮೂಲಕ ಶೈಕ್ಷಣಿಕ ಉತ್ಕೃಷ್ಟತೆ, ಕ್ರಿಯಾತ್ಮಕ ಜ್ಞಾನವನ್ನು ಖಚಿತಪಡಿಸಿಕೊಳ್ಳಲು