ಭಾರತೀಯ ಯುವ ರೆಡ್ ಕ್ರಾ ಸ್ ಘಟಕ

ಭಾರತೀಯ ರೆಡ್ ಕ್ರಾ ಸ್ ಸಂಸ್ಥೆ ಯು ಅಂತರರಾಷ್ಟ್ರೀಯ ಮಾನವೀಯ ಸೇವಾ ಸಂಸ್ಥೆಯಾಗಿದ್ದು, ಈ ಸಂಸ್ಥೆಯು ಕೇಂದ್ರೀಯ ಕಾಯ್ದೆಯಡಿಯಲ್ಲಿ ಇಂಡಿಯನ್ ರೆಡ್ ಕ್ರಾ ಸ್ ಸೊಸೈಟಿ ಆಕ್ಟ್ 1920ರ ಅಡಿಯಲ್ಲಿ ಸ್ಥಾಪಿಸಲಾಗಿದೆ. ಸನ್ಮಾನ್ಯ ರಾಷ್ಟ್ರಪತಿಗಳು ಸಂಸ್ಥೆಯು ಅಧ್ಯಕ್ಷರಾಗಿರುತ್ತಾರೆ. 1921 ರಿಂದ ಈ ಸಂಸ್ಥೆಯು ಕರ್ನಾಟಕ ರಾಜ್ಯದಲ್ಲಿಯೂ ಅಸ್ಥಿತ್ವದಲ್ಲಿ ಬಂದಿದೆ. ರಾಜ್ಯ ಶಾಖೆಗೆ ಘನತೆವೆತ್ತ ರಾಜ್ಯ ಪಾಲರು ಅಧ್ಯಕ್ಷರಾಗಿರುತ್ತಾರೆ.

ಈ ಸಂಸ್ಥೆಯು ಯುದ್ಧ ಸಮಯದಲ್ಲಿ ಗಾಯಗಂಡ ಸೈನಿಕರಿಗೆ, ನೈಸರ್ಗಿಕ ವಿಪತ್ತು, ವಿಕೋಪಗಳು ಸಂಭವಿಸಿದಾಗ ಪರಿಹಾರ ಕಾರ್ಯದಲ್ಲಿ ಹಾಗೂ ಸಾರ್ವಜನಿಕರಿಗೆ ಶೂಶ್ರುಷೆ ಮಾಡುವ ಸೇವಾ ಸಂಸ್ಥೆಯಾಗಿದೆ; ಆರೋಗ್ಯದ ಬಗೆೆ ಅರಿವು ಮತ್ತು ಶಿಕ್ಷಣ, ರಕ್ತನಿಧಿಗಳು, ಅಂಗವಿಕಲರಿಗೆ ಸಾಧನ ಸಲಕರಣೆಗಳ ವಿತರಣೆ, ಪ್ರಥಮ ಚಿಕಿತ್ಸೆ, ಯುದ್ಧ, ಪ್ರಕೃತಿ ವಿಕೋಪಗಳಿಂದಾಗಿ ಚದುರಿಹೋಗಿರುವ ಕುಟಂಬಗಳ ಸದಸ್ಯರನ್ನು ಪತ್ತೆ ಮಾಡಿ ಒಂದುಗೂಡಿಸುವುದು, ಕೌಶಲ್ಯ ಅಭಿವೃದ್ಧಿ ಇತ್ಯಾದಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬಂದಿದೆ . ಮಾನವೀಯತೆ, ನಿಷ್ಪಕ್ಷಪಾತ, ತಟಸ್ಥ ನಿಲುವು, ಸ್ವಾತಂತ್ರ್ಯ , ಸ್ವಯಂ ಸೇವಾ ಮನೋಭಾವ, ಒಗ್ಗಟ್ಟು ಮತ್ತು ವಿಶ್ವ ವ್ಯಾಪಕತೆ ಭಾರತೀಯ ರೆಡ್ ಕ್ರಾ ಸ್ ಸಂಸ್ಥೆ ಯ ಏಳು ತತ್ವಗಳು.ಈ ಎಲ್ಲಾ ಮಾನವೀಯತೆಯ ಗುಣಗಳನ್ನು ಕಾಲೇಜು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಸುವ ಉದ್ದೇಶದಿಂದ ಸರ್ಕಾರವು ರೆಡ್ ಕ್ರಾಸ್ ಸಂಸ್ಥೆ, ಕನ್ಮಾಟಕ ರಾಜ್ಯ ಶಾಖೆಯ ಈ ಕೆಳಕಂಡಂತೆ ಆದೇಶಿಸಿದೆ. ಸರ್ಕಾರಿ ಆದೇಶ ಸಂಖ್ಯೆ : ಇಡಿ 64 /ವಿವಿಧ/ 2011 ಬೆಂಗಳೂರು, ದಿನಾಂಕ : 22.12.2011 ರ ಪ್ರಕಾರ ಪ್ರತಿ ಕಾಲೇಜಿನಲ್ಲಿ ಯುವ ರೆಡ್ ಕ್ರಾ ಸ್ ಘಟಕವನ್ನು ಸ್ಥಾಪಿಸುವುದು ಅತ್ಯವಶ್ಯಕವಾಗಿರುತ್ತದೆ ಎಂದು ತಿಳಿಸುತ್ತಾ ಇದಕ್ಕೆ ಪೂರಕವಾಗಿ ರಾಜ್ಯದಲ್ಲಿರುವ ಎಲ್ಲಾ ಸರ್ಕಾರಿ ಅನುದಾನಿತ ಹಾಗೂ ಅನುದಾನರಹಿತ ಪ್ರಥಮ ದರ್ಜೆ ಕಾಲೇಜುಗಳು ಒಮ್ಮೆ ರೂ. 1.500/- ಪಾವತಿಸಿ, ಆಯಾ ಕಾಲೇಜಿನಲ್ಲಿ ಯುವ ರೆಡ್ ಕ್ರಾ ಸ್ ಘಟಕವನ್ನು ಪ್ರಾರಂಭಿಸಲು ಹಾಗೂ ಕಾಲೇಜಿನ ಪ್ರವೇಶ ಶುಲ್ಕವನ್ನು ಪಡೆಯುವಾಗ ಪ್ರತಿಯೊಬ್ಬ ವಿದ್ಯಾರ್ಥಿಯಿಂದ ಪ್ರತಿ ವರ್ಷ ರೂ. 50/-ರಂತೆ ಶುಲ್ಕವನ್ನು ಪಡೆಯಲು ಹಾಗೆ ಸಂಗ್ರಹಿಸಿದ ಶುಲ್ಕದಲ್ಲಿ ಶೇ. 70 ರಷ್ಟನ್ನು ಕಾಲೇಜಿನ ಯುವ ರೆಡ್ ಕ್ರಾ ಸ್ ಘಟಕದಲ್ಲಿ ಉಳಿಸಿಕೊಂಡು ಅದರ ಕಾರ್ಯಕ್ರಮಗಳಿಗೆ ಬಳಿಸಿಕೊಳ್ಳುವುದು ಹಾಗೂ ಉಳಿದ ಶೇ. 30 ಅನ್ನು ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಕರ್ನಾಟಕ ರಾಜ್ಯ ಶಾಖೆ, ಬೆಂಗಳೂರಿಗೆ ಕಳುಹಿಸುವುದು.

ಇದೇ ದೆಯೋದ್ದೇಶದೊಂದಿಗೆ ಬಾಗಲಕೋಟೆ ವಿಶ್ವ ವಿದ್ಯಾಲಯ ಹಾಗು ಅದರ ಸಂಯೋಜಿತ ಮಹಾ ವಿದ್ಯಾಲಯಗಳಲ್ಲಿ ಭಾರತೀಯ ಯುವ ರೆಡ್ ಕ್ರಾಸ್ ಘಟಕವನ್ನು ಸ್ಥಾಪಿಸಲು ತಿಳಿಸಲಾಗಿದೆ. ಎಲ್ಲಾ ಮಹಾ ವಿದ್ಯಾಲಯಗಳಲ್ಲಿ ಮೇಲ್ಕಾಣಿಸಿದ ಮಾರ್ಗ ಸೂಚಿಗಳನ್ನು ಅನುಸರಿಸಿ ಯುವ ರೆಡ್ ಕ್ರಾಸ್ ಘಟಕವನ್ನು ಸ್ಥಾಪಿಸಿ ಎಲ್ಲಾ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲು ತಿಳಿಸಲಾಗಿದೆ.

ಡಾ. ರಾಜೇಶ್ವರಿ ಎಸ್. ಮಠದ
ನೋಡಲ್ ಅಧಿಕಾರಿಗಳು

ಭಾರತೀಯ ಯುವ ರೆಡ್ ಕ್ರಾ ಸ್ ಘಟಕ
ಬಾಗಲಕೋಟೆ ವಿಶ್ವವಿದ್ಯಾಲಯ
ಜಮಖಂಡಿ.

bgku.ircskar@gmail.com