ಕನ್ನಡ 

ವಿಭಾಗದ ಕುರಿತು:


ಕನ್ನಡ ವಿಭಾಗವು ಬಾಗಲಕೋಟ ವಿಶ್ವವಿದ್ಯಾಲಯದ ಬಹುಮುಖ್ಯವಾದ ವಿಭಾಗಗಳಲ್ಲಿ ಒಂದಾಗಿದೆ. ಇದು 2023-24ರಲ್ಲಿ ಪ್ರಾರಂಭವಾಯ್ತು. ಈಗ ಈ ವಿಭಾಗವು ತನ್ನದೇ ಆದ ಸ್ವತಂತ್ರ ಅಸ್ತಿತ್ವವನ್ನು ಹೊಂದಿದೆ. ಕನ್ನಡ, ಕನ್ನಡಿಗ, ಕರ್ನಾಟಕ ಹಾಗೂ ಕನ್ನಡ ಸಾಹಿತ್ಯ, ಸಂಸ್ಕೃತಿ ಮತ್ತು ಪರಂಪರೆಗಳನ್ನು ಉಳಿಸುವುದಕ್ಕಾಗಿ, ಬೆಳೆಸುವುದಕ್ಕಾಗಿ ಅವಿರತವಾಗಿ ಶ್ರಮಿಸುತ್ತಿದೆ. ಇದರಲ್ಲಿ ಪರಿಣತ, ಪಾಂಡಿತ್ಯ ಪೂರ್ಣ ಮತ್ತು ಸದಾ ಕರ್ತವ್ಯಶೀಲರಾದ ಬೋಧಕ ಸಿಬ್ಬಂದಿಯವರು ಇದ್ದಾರೆ. ಹೀಗಾಗಿ ಈ ವಿಭಾಗವು ವಿವಿಧ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಗಳನ್ನು ಜೋಡಿಸುವ ಸೇತುವೆಯಾಗಿ ದುಡಿಯುತ್ತಿದೆ.

ಧ್ಯೇಯೋದ್ದೇಶ:
“ಜಾಗತಿಕ ಮಟ್ಟದಲ್ಲಿ ಕನ್ನಡ  ಭಾಷೆಯ ಮತ್ತು ಅದರ ಸಂಸ್ಕೃತಿಯನ್ನು ಪ್ರಸಾರ ಮಾಡುವುದು”

ಘನೋದ್ದೇಶ:
1. ವಿಶ್ವದೆಲ್ಲೆಡೆ ಕನ್ನಡ ಭಾಷೆ, ಸಾಹಿತ್ಯ, ಜೀವನ ಶೈಲಿಗಳನ್ನೊಳಗೊಂಡ ಕನ್ನಡವನ್ನು ಪಸರಿಸುವುದು.
2. ಕನ್ನಡ ಭಾಷೆಯ ಹಿರಿಮೆಯನ್ನು ಹೆಚ್ಚಿಸುವುದು.

3.ಕನ್ನಡ ಸಾಹಿತ್ಯವನ್ನು ಪ್ರಚುರಪಡಿಸುವುದು. ಕನ್ನಡ ಭಾಷೆಯ ಸತ್ತ್ವ, ಶಕ್ತಿಯ ಅರಿವನ್ನುಂಟು ಮಾಡುವುದು.

ಶೀರ್ಷಿಕೆ : ಕನ್ನಡದಲ್ಲಿ ಸ್ನಾತಕೋತ್ತರ ಪದವಿ (ಕನ್ನಡ ಎಂ.) ಪ್ರವೇಶಾತಿ: ಕನ್ನಡದಲ್ಲಿ ಸ್ನಾತಕೋತ್ತರ  ಪದವಿಯು 2 ವರ್ಷದ ಅವಧಿಯ ಕೋರ್ಸ್ ನ್ನು
ವಿಭಾಗವು 60 ವಿದ್ಯಾರ್ಥಿಗಳೊಂದಿಗೆ ಆರಂಭಿಸಿದೆ.

ಅರ್ಹತೆ: ಯು.ಜಿ.ಸಿ ಯಿಂದ ಮಾನ್ಯತೆ ಪಡೆದ ಯಾವುದೇ ವಿಶ್ವವಿದ್ಯಾಲಯದಿಂದ ಪದವಿ ಪರೀಕ್ಷೆ ಮುಗಿಸಿರಬೇಕು. ಈ ಪದವಿ ಪರೀಕ್ಷೆಯಲ್ಲಿ ಕನ್ನಡವನ್ನು ಪ್ರಧಾನ/ಐಚ್ಛಿಕ/ಬೇಸಿಕ್ ವಿಷಯವಾಗಿ ಆಯ್ದುಕೊಂಡು, ಸರಾಸರಿ 45% ಅಂಕ ಗಳಿಸಿರಬೇಕು. ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದವರಿಗಾಗಿ/ಕ್ಯಾಟಗರಿ I ದವರಿಗಾಗಿ 5% ರಿಯಾಯಿತಿ ಇದೆ.

ಪ್ರವೇಶಾತಿ ನಿಯಮಗಳು: ಸದ್ಯಕ್ಕೆ ಜಾರಿಯಲ್ಲಿರುವ ವಿಶ್ವವಿದ್ಯಾಲಯದ ಹಾಗೂ ಕರ್ನಾಟಕ ಸರಕಾರದ ನಿಯಮಾವಳಿ ಪ್ರಕಾರ ಮತ್ತು ವಿಶ್ವವಿದ್ಯಾಲಯ ಹಾಗೂ ಕರ್ನಾಟಕ ಸರಕಾರವು ಕಾಲಕಾಲಕ್ಕೆ ಜಾರಿಗೊಳಿಸುವ ಮೀಸಲಾತಿ ನಿಯಮಗಳ ಪ್ರಕಾರ ಪ್ರವೇಶ ನೀಡಲಾಗುವುದು.

ಅವಧಿ:   2ವರ್ಷ– 4ಸೆಮಿಸ್ಟ್ರಗಳು

ವಿಭಾಗದಲ್ಲಿ ದೊರೆಯುವ ಸೌಲಭ್ಯಗಳು

  1. ಸುಸಜ್ಜಿತವಾದ ತರಗತಿ ಕೋಣೆಗಳು.
  2. ಉತ್ತಮವಾದ ಗ್ರಂಥಾಲಯದ ವ್ಯವಸ್ಥೆ.
  3. ಅನುಭವಿ ಉಪನ್ಯಾಸಕರಿಂದ ಬೋಧನೆ.
  4. ವೃತ್ತಿ ಬೆಳವಣಿಗೆಗೆ ಉತ್ತಮವಾದಂತಹ ವಾತಾವರಣ.
  5. ನಿರಂತರವಾದ ಪಠ್ಯ ಮತ್ತು ಸಹಪಠ್ಯ ಚಟುವಟಿಕೆಗಳು.

ಸಂಪರ್ಕಿಸಿ

 ಕುಲಸಚಿವರು

 ಬಾಗಲಕೋಟೆ ವಿಶ್ವವಿದ್ಯಾಲಯ

 ಜಮಖಂಡಿ 587301

P H -08353295124