ಕನ್ನಡ
ವಿಭಾಗದ ಕುರಿತು:
ಕನ್ನಡ ವಿಭಾಗವು ಬಾಗಲಕೋಟ ವಿಶ್ವವಿದ್ಯಾಲಯದ ಬಹುಮುಖ್ಯವಾದ ವಿಭಾಗಗಳಲ್ಲಿ ಒಂದಾಗಿದೆ. ಇದು 2023-24ರಲ್ಲಿ ಪ್ರಾರಂಭವಾಯ್ತು. ಈಗ ಈ ವಿಭಾಗವು ತನ್ನದೇ ಆದ ಸ್ವತಂತ್ರ ಅಸ್ತಿತ್ವವನ್ನು ಹೊಂದಿದೆ. ಕನ್ನಡ, ಕನ್ನಡಿಗ, ಕರ್ನಾಟಕ ಹಾಗೂ ಕನ್ನಡ ಸಾಹಿತ್ಯ, ಸಂಸ್ಕೃತಿ ಮತ್ತು ಪರಂಪರೆಗಳನ್ನು ಉಳಿಸುವುದಕ್ಕಾಗಿ, ಬೆಳೆಸುವುದಕ್ಕಾಗಿ ಅವಿರತವಾಗಿ ಶ್ರಮಿಸುತ್ತಿದೆ. ಇದರಲ್ಲಿ ಪರಿಣತ, ಪಾಂಡಿತ್ಯ ಪೂರ್ಣ ಮತ್ತು ಸದಾ ಕರ್ತವ್ಯಶೀಲರಾದ ಬೋಧಕ ಸಿಬ್ಬಂದಿಯವರು ಇದ್ದಾರೆ. ಹೀಗಾಗಿ ಈ ವಿಭಾಗವು ವಿವಿಧ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಗಳನ್ನು ಜೋಡಿಸುವ ಸೇತುವೆಯಾಗಿ ದುಡಿಯುತ್ತಿದೆ.
ಧ್ಯೇಯೋದ್ದೇಶ:
“ಜಾಗತಿಕ ಮಟ್ಟದಲ್ಲಿ ಕನ್ನಡ ಭಾಷೆಯ ಮತ್ತು ಅದರ ಸಂಸ್ಕೃತಿಯನ್ನು ಪ್ರಸಾರ ಮಾಡುವುದು”
ಘನೋದ್ದೇಶ:
1. ವಿಶ್ವದೆಲ್ಲೆಡೆ ಕನ್ನಡ ಭಾಷೆ, ಸಾಹಿತ್ಯ, ಜೀವನ ಶೈಲಿಗಳನ್ನೊಳಗೊಂಡ ಕನ್ನಡವನ್ನು ಪಸರಿಸುವುದು.
2. ಕನ್ನಡ ಭಾಷೆಯ ಹಿರಿಮೆಯನ್ನು ಹೆಚ್ಚಿಸುವುದು.
3.ಕನ್ನಡ ಸಾಹಿತ್ಯವನ್ನು ಪ್ರಚುರಪಡಿಸುವುದು. ಕನ್ನಡ ಭಾಷೆಯ ಸತ್ತ್ವ, ಶಕ್ತಿಯ ಅರಿವನ್ನುಂಟು ಮಾಡುವುದು.
ಶೀರ್ಷಿಕೆ : ಕನ್ನಡದಲ್ಲಿ ಸ್ನಾತಕೋತ್ತರ ಪದವಿ (ಕನ್ನಡ ಎಂ.ಎ) ಪ್ರವೇಶಾತಿ: ಕನ್ನಡದಲ್ಲಿ ಸ್ನಾತಕೋತ್ತರ ಪದವಿಯು 2 ವರ್ಷದ ಅವಧಿಯ ಕೋರ್ಸ್ ನ್ನು
ವಿಭಾಗವು 60 ವಿದ್ಯಾರ್ಥಿಗಳೊಂದಿಗೆ ಆರಂಭಿಸಿದೆ.
ಅರ್ಹತೆ: ಯು.ಜಿ.ಸಿ ಯಿಂದ ಮಾನ್ಯತೆ ಪಡೆದ ಯಾವುದೇ ವಿಶ್ವವಿದ್ಯಾಲಯದಿಂದ ಪದವಿ ಪರೀಕ್ಷೆ ಮುಗಿಸಿರಬೇಕು. ಈ ಪದವಿ ಪರೀಕ್ಷೆಯಲ್ಲಿ ಕನ್ನಡವನ್ನು ಪ್ರಧಾನ/ಐಚ್ಛಿಕ/ಬೇಸಿಕ್ ವಿಷಯವಾಗಿ ಆಯ್ದುಕೊಂಡು, ಸರಾಸರಿ 45% ಅಂಕ ಗಳಿಸಿರಬೇಕು. ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದವರಿಗಾಗಿ/ಕ್ಯಾಟಗರಿ I ದವರಿಗಾಗಿ 5% ರಿಯಾಯಿತಿ ಇದೆ.
ಪ್ರವೇಶಾತಿ ನಿಯಮಗಳು: ಸದ್ಯಕ್ಕೆ ಜಾರಿಯಲ್ಲಿರುವ ವಿಶ್ವವಿದ್ಯಾಲಯದ ಹಾಗೂ ಕರ್ನಾಟಕ ಸರಕಾರದ ನಿಯಮಾವಳಿ ಪ್ರಕಾರ ಮತ್ತು ವಿಶ್ವವಿದ್ಯಾಲಯ ಹಾಗೂ ಕರ್ನಾಟಕ ಸರಕಾರವು ಕಾಲಕಾಲಕ್ಕೆ ಜಾರಿಗೊಳಿಸುವ ಮೀಸಲಾತಿ ನಿಯಮಗಳ ಪ್ರಕಾರ ಪ್ರವೇಶ ನೀಡಲಾಗುವುದು.
ಅವಧಿ: 2ವರ್ಷ– 4ಸೆಮಿಸ್ಟ್ರಗಳು
ವಿಭಾಗದಲ್ಲಿ ದೊರೆಯುವ ಸೌಲಭ್ಯಗಳು
- ಸುಸಜ್ಜಿತವಾದ ತರಗತಿ ಕೋಣೆಗಳು.
- ಉತ್ತಮವಾದ ಗ್ರಂಥಾಲಯದ ವ್ಯವಸ್ಥೆ.
- ಅನುಭವಿ ಉಪನ್ಯಾಸಕರಿಂದ ಬೋಧನೆ.
- ವೃತ್ತಿ ಬೆಳವಣಿಗೆಗೆ ಉತ್ತಮವಾದಂತಹ ವಾತಾವರಣ.
- ನಿರಂತರವಾದ ಪಠ್ಯ ಮತ್ತು ಸಹಪಠ್ಯ ಚಟುವಟಿಕೆಗಳು.
ಸಂಪರ್ಕಿಸಿ
ಕುಲಸಚಿವರು
ಬಾಗಲಕೋಟೆ ವಿಶ್ವವಿದ್ಯಾಲಯ
ಜಮಖಂಡಿ 587301
P H -08353295124