ಡಾ. ಮಲ್ಲಿಕಾರ್ಜುನ ಎಂ. ಮರಡಿ ಅವರು ೨೦೦೯ ಮತ್ತು ೨೦೧೧ ರಲ್ಲಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಕ್ರಮವಾಗಿ ಬಿ.ಕಾಂ ಮತ್ತು ಎಂ.ಕಾA ಪದವಿಯನ್ನು ಪಡೆದಿದ್ದಾರೆ. ಅವರು ೨೦೧೩ ರಲ್ಲಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದÀಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ವಾಣಿಜ್ಯಶಾಸ್ತç ವಿಭಾಗದಲ್ಲಿ ನೇಮಕಗೊಂಡರು. ವಿಜಯಪುರ ಮತ್ತು ಜಮಖಂಡಿ ಸ್ನಾತಕೋತ್ತರ ಕೇಂದ್ರಗಳಲ್ಲಿ ಸೇವೆ ಸಲ್ಲಿಸಿದರು. ೨೦೨೧ ರಲ್ಲಿ, ಅವರು ಪಿಎಚ್‌ಡಿ ಪದವಿಯನ್ನು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಿಂದ ಪಡೆದರು. ಅವರು ೧೨ ವರ್ಷಗಳಿಗಿಂತ ಹೆಚ್ಚು ಬೋಧನೆ ಮತ್ತು ಸಂಶೋಧನಾ ಅನುಭವವನ್ನು ಹೊಂದಿದ್ದಾರೆ. ಅವರು ಆಲ್ ಇಂಡಿಯಾ ಕಾಮರ್ಸ್ ಅಸೋಸಿಯೇಷನ್ ಮತ್ತು ಆಲ್ ಇಂಡಿಯಾ ಅಕೌಂಟಿOಗ್ ಅಸೋಸಿಯೇಷನ್‌ನ ಆಜೀವ ಸದಸ್ಯರಾಗಿದ್ದಾರೆ. ಅವರು ೨೦೧೬ ರಿಂದ ಗ್ಲೋಬಲ್ ಜರ್ನಲ್ ಆಫ್ ಮಲ್ಟಿಡಿಸಿಪ್ಲಿನರಿ ಸ್ಟಡೀಸ್‌ನ ಸಂಪಾದಕೀಯ ಮಂಡಳಿಯ ಸದಸ್ಯರಾಗಿದ್ದಾರೆ. ಅವರಿಗೆ ೨೦೧೮ ರಲ್ಲಿ ಸಾಹಿತ್ಯದ ಕೆಲಸಕ್ಕಾಗಿ ರಾಜ್ಯ ಮಟ್ಟದ ‘ಕುದ್ಮಲ್ ರಂಗರಾವ್ ಪ್ರಶಸ್ತಿ’ ನೀಡಲಾಗಿದೆ. ಅವರು ೫೫ ಕ್ಕೂ ಹೆಚ್ಚು ಸಂಶೋಧನಾ ಪ್ರಬಂಧಗಳನ್ನು ಪೀರ್ ರಿವ್ಯೂಡ್ ಅಂತರಾಷ್ಟ್ರೀಯ ಮತ್ತು ರಾಷ್ಟ್ರೀಯ ನಿಯತಕಾಲಿಕಗಳಲ್ಲಿ ಪ್ರಕಟಿಸಿದ್ದಾರೆ. ೬೮ ಕ್ಕೂ ಹೆಚ್ಚು ಸಮ್ಮೇಳನಗಳು, ಕಾರ್ಯಾಗಾರಗಳು ಮತ್ತು ವಿಚಾರ ಸಂಕಿರಣಗಳಲ್ಲಿ ಭಾಗವಹಿಸಿದ್ದಾರೆ. ರಾಜ್ಯ ಮತ್ತು ರಾಷ್ಟೃ ಮಟ್ಟದಲ್ಲಿ ಕಾರ್ಯಾಗಾರಗಳಿಗೆ ಮುಖ್ಯ ಭಾಷಣಕಾರರಾಗಿ ಮತ್ತು ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಲು ಆಹ್ವಾನಿಸಲಾಗಿದೆ. ಜಮಖಂಡಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ, ಸ್ನಾತಕೋತ್ತರ ಕೇಂದ್ರದಲ್ಲಿ ಐದು ರಾಷ್ಟ್ರೀಯ ಮಟ್ಟದ ಕಾರ್ಯಾಗಾರಗಳನ್ನು ಏರ್ಪಡಿಸಿದ್ದಾರೆ. ಎಂಟು ಪುಸ್ತಕಗಳನ್ನು ಪ್ರಕಟಿಸಲಾಗಿದೆ. ಪ್ರಸ್ತುತ ನಾಲ್ಕು ಪಿಎಚ್.ಡಿ. ವಿದ್ಯಾರ್ಥಿಗಳು ಅವರ ಮಾರ್ಗದರ್ಶನದಲ್ಲಿ ಸಂಶೋಧನೆಗೆ ನೊಂದಾಯಿಸಿಕೊAಡಿದ್ದಾರೆ. ೨೦೧೮ ರಿಂದ ಸ್ನಾತಕೋತ್ತರ ಕೇಂದ್ರದ, ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಎನ್.ಎಸ್.ಎಸ್. ಕಾರ್ಯಕ್ರಮ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಏಪ್ರಿಲ್ ೨೦೨೩ ದಿಂದ, ಅವರು ಬಾಗಲಕೋಟ ವಿಶ್ವವಿದ್ಯಾಲಯ ಜಮಖಂಡಿಯಲ್ಲಿ ಹಣಕಾಸು ಅಧಿಕಾರಿಯಾಗಿ (ಪ್ರಭಾರಿ) ಸೇವೆ ಸಲ್ಲಿಸುತ್ತಿದ್ದಾರೆ.