ಡಾ. ಎಂ. ಸಿ. ಸುಧಾಕರ್ ಅವರು ಕರ್ನಾಟಕ ರಾಜ್ಯದ ಒಬ್ಬ ಭಾರತೀಯ ರಾಜಕಾರಣಿ.

ಡಾ.ಎಂ.ಸಿ.ಸುಧಾಕರ್ ಅವರು ದಂತವೈದ್ಯರಾಗಿ ಪದವಿ ಪಡೆದು ರಾಜಕೀಯಕ್ಕೆ ಧುಮುಕುವ ಮೊದಲು ಅಂಬೇಡ್ಕರ್ ದಂತ ವೈದ್ಯಕೀಯ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಮತ್ತು ಮಾರುತಿ ಡೆಂಟಲ್ ಕಾಲೇಜಿನಲ್ಲಿ ಪ್ರೊಸ್ಟೊಡಾಂಟಿಕ್ಸ್ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ.

ಡಾ.ಎಂ.ಸಿ. ಸುಧಾಕರ್ ಅವರು ಇಂಡಿಯನ್ ಡೆಂಟಲ್ ಅಸೋಸಿಯೇಷನ್‌ನ ಕರ್ನಾಟಕ ಚಾಪ್ಟರ್‌ನ ಅಧ್ಯಕ್ಷರಾಗಿದ್ದರು ಮತ್ತು ತಮ್ಮ ಅಧಿಕಾರಾವಧಿಯಲ್ಲಿ ಕರ್ನಾಟಕ ಡೆಂಟಲ್ ಅಸೋಸಿಯೇಷನ್‌ಗೆ ಹೊಸ ಹಾದಿಯನ್ನು ಕೆತ್ತಿದ್ದರು.